ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಎಲಗುಪ್ಪ (ಕರವಾ) ಗ್ರಾಮದಲ್ಲಿರುವ ಶ್ರೀ ಧನ್ವಂತರಿ ಮಹಾವಿಷ್ಣು ದೇವಸ್ಥಾನವು ಇಡೀ ಕರ್ನಾಟಕದಲ್ಲಿಯೇ ಏಕೈಕ ಧನ್ವಂತರಿ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊನ್ನಾವರದಿಂದ ಗೇರುಸೊಪ್ಪೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ 11.5 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ವರದಳ್ಳಿಯ ಶ್ರೀಧರ ಸ್ವಾಮಿಗಳು ಈ ಕ್ಷೇತ್ರದ ಮಹಿಮೆಯನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದು, ಇದು ಆರೋಗ್ಯ ಮತ್ತು ಆಯುರ್ವೇದದ ಅಧಿದೇವತೆಯಾದ ಧನ್ವಂತರಿ ನೆಲೆಸಿರುವ ಅಪರೂಪದ ಶಕ್ತಿ ಸ್ಥಳವಾಗಿದೆ. ಭಗವಾನ್ ಧನ್ವಂತರಿ ಮೂರ್ತಿಯು ಬಲಗೈಯಲ್ಲಿ ಅಮೃತ ಕಲಶವನ್ನು ಹಿಡಿದಿರುವುದು ಈ ಕ್ಷೇತ್ರದ ವಿಶಿಷ್ಟತೆಯಾಗಿದ್ದು, ಇದು ಶ್ರೀಮದ್ಭಾಗವತದ ಉಲ್ಲೇಖಗಳಿಗೆ ಕರಾರುವಾಕ್ಕಾಗಿ ಹೊಂದುತ್ತದೆ
ಇಲ್ಲಿನ ತೀರ್ಥಕೆರೆಯಲ್ಲಿ (ಪುಷ್ಕರಣಿ) ಸಾಕ್ಷಾತ್ ಅಮೃತ ಬಿಂದುಗಳಿದ್ದು, ಇದರಲ್ಲಿ ಸ್ನಾನ ಮಾಡುವುದರಿಂದ ಮತ್ತು ತೀರ್ಥ ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಸೋರಿಯಾಸಿಸ್‌ನಂತಹ ಕಠಿಣ ಚರ್ಮರೋಗಗಳು, ತಲೆಕೂದಲು ಉದುರುವಿಕೆ ಸೇರಿದಂತೆ ಅನೇಕ ದೈಹಿಕ ಮತ್ತು ಕೌಟುಂಬಿಕ ಅನುವಂಶಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ. ಅನಾರೋಗ್ಯ ಪೀಡಿತರು ಹಾಗೂ ಆರೋಗ್ಯವಂತರು ಆಯುಷ್ಯ ವೃದ್ಧಿಗಾಗಿ ಇಲ್ಲಿಗೆ ಆಗಮಿಸಿ ಧನ್ವಂತರಿ ಹೋಮ, ಮೃತ್ಯುಂಜಯ ಹೋಮ, ಶತರುದ್ರ, ರುದ್ರಾರಾಧನೆ ಹಾಗೂ ಚರ್ಮವ್ಯಾಧಿಗಳಿಗಾಗಿ 'ತುಕ್ಕದೋಷಹರ ಶಾಂತಿ'ಯಂತಹ ವೇದೋಕ್ತ ಕರ್ಮಗಳನ್ನು ಶ್ರದ್ಧೆಯಿಂದ ಮಾಡಿಸುತ್ತಾರೆ. ಪ್ರತಿ ವರ್ಷ ಕಾರ್ತಿಕ ಮಾಸದ ಬಹುಳ ಏಕಾದಶಿ, ದ್ವಾದಶಿ ಮತ್ತು ತ್ರಯೋದಶಿಯಂದು ಸತತ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು, ಲಕ್ಷ ಜಪ ಹಾಗೂ ನವಗ್ರಹಪೂರ್ವಕ ಹೋಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಧನ್ವಂತರಿ ಜಯಂತಿಯನ್ನು ಇಲ್ಲಿ ಆಚರಿಸಲಾಗುತ್ತದೆ.
ಕ್ಷೇತ್ರದ ಪ್ರಧಾನ ಅರ್ಚಕರು ಹಾಗೂ ಪಾರಂಪರಿಕ ಆಯುರ್ವೇದ ವೈದ್ಯರಾದ ಡಾ. ಗೋಪಾಲ್ ಹೆಗಡೆಯವರು ತಮ್ಮ ಪೂರ್ವಜರ ಪರಂಪರೆಯನ್ನು ಮುಂದುವರಿಸಿಕೊಂಡು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಜ್ಯೋತಿಷ್ಯ, ಕುಂಡಲಿ ಪರಿಶೀಲನೆ ಹಾಗೂ ಔಷಧೋಪಚಾರಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಿರ್ಮಿಸಲಾಗಿರುವ 50 ಎಕರೆ ವಿಸ್ತೀರ್ಣದ 'ಧನ್ವಂತರಿ ವನ'ದ ಅಪರೂಪದ ವನಸ್ಪತಿಗಳ ಔಷಧದೊಂದಿಗೆ ದೈವಿಕ ಮಂತ್ರಗಳ ಶಕ್ತಿಯನ್ನು ಸಂಪುಟೀಕರಿಸಿ ರೋಗಿಗಳಿಗೆ ನೀಡಲಾಗುತ್ತದೆ. ರೋಗಿಗಳ ಮನಸ್ಸಿನ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಮೂತ್ರಪಿಂಡದ ಕಲ್ಲು (ಕಿಡ್ನಿ ಸ್ಟೋನ್), ಮಧುಮೇಹ, ಸಂತತಿಹೀನತೆಯಂತಹ ಜಟಿಲ ಸಮಸ್ಯೆಗಳಿಗೂ ಇಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗುತ್ತಿದ್ದು, ದೇವರ ಮೇಲಿನ ಶ್ರದ್ಧಾ-ಭಕ್ತಿ ಹಾಗೂ ಧನ್ವಂತರಿ ಮಹಾವಿಷ್ಣುವಿನ ಅನುಗ್ರಹದಿಂದ ಸಕಲ ಕಾಯಿಲೆಗಳೂ ನಿವಾರಣೆಯಾಗುತ್ತವೆ ಎಂಬುದು ಈ ತಾಣದ ಪ್ರಮುಖ ಸಂದೇಶವಾಗಿದೆ.
Located in Yalaguppa (Karava) village of Honnavar taluk in Uttara Kannada district, the Shri Dhanvantari Mahavishnu Temple holds the distinction of being the only Dhanvantari temple in the entire state of Karnataka. Situated 11.5 km from Honnavar on National Highway 206 towards Gerusoppa, this sacred site boasts a history of about 800 years. Shridhara Swamy of Varadahalli brought the glory of this shrine to the world's attention, identifying it as a rare energy center (shakti sthala) where Dhanvantari, the presiding deity of health and Ayurveda, resides. A unique feature of the Bhagavan Dhanvantari idol here is that it holds the pot of nectar (Amruta Kalasha) in its right hand, which perfectly aligns with the descriptions found in the Shrimad Bhagavata Purana.
The temple's sacred pond (Pushkarini or Teertha Kere) is believed to contain actual drops of divine nectar. Devotees hold a strong belief that bathing in it and sprinkling its holy water cures severe skin diseases like psoriasis, hair loss, and various other physical and hereditary ailments. Both the sick and the healthy visit this shrine seeking longevity and wellness, earnestly performing Vedic rituals such as the Dhanvantari Homa, Mrityunjaya Homa, Shatarudra, Rudraradhana, and the 'Tukkadoshahara Shanti' specifically meant for skin diseases. Every year during the month of Kartik (on Bahula Ekadashi, Dwadashi, and Trayodashi), Dhanvantari Jayanti is celebrated with great grandeur for three consecutive days, featuring cultural programs, the chanting of one lakh mantras, and Navagraha homas.
The temple's chief priest and traditional Ayurvedic physician, Dr. Gopal Hegde, continues his ancestral legacy by treating visiting devotees through astrology, horoscope analysis, and herbal medicine. Medicines are prepared using rare medicinal plants from the 50-acre 'Dhanvantari Vana'—cultivated in collaboration with the Forest Department—and are infused with the power of divine mantras before being given to patients. By eliminating fear and instilling self-confidence in patients, the center successfully treats complex medical conditions such as kidney stones, diabetes, and infertility. The core message of this shrine is that with earnest devotion and the grace of Dhanvantari Mahavishnu, all illnesses can be completely cured.
Temple Leadership
Temple Seva & Pooja Services
Divine moments from the temple
Watch temple moments and celebrations
Coming Soon
Plan Your Visit